ಕಂಧ : ವೇದತತ್ತ್ವವೇತ್ತನಾದ ಒಬ್ಬ ಋಷಿ. ಕಂಡು ಎಂದೂ ಹೆಸರು. ಗೋಮತೀ ನದಿಯ ತೀರದಲ್ಲಿ ತೀವ್ರವಾದ ತಪಸ್ಸನ್ನಾಚರಿಸುತ್ತಿರುವಾಗ ತಪೋಭಂಗ ಮಾಡಲೋಸುಗ ದೇವೇಂದ್ರ ಪ್ರಮ್ಲೋಚಾ ಎಂಬ ಅಪ್ಸರ ಸ್ತ್ರೀಯನ್ನು ಕಳುಹಿಸಿದ. ಆ ದಿವ್ಯಾಂಗನೆಯೊಡನೆ ಕಂಧ ಋಷಿ ಒಂಬೈನೂರು ವರ್ಷಗಳ ಕಾಲ ಸಂಸಾರಜೀವನ ನಡೆಸಿದ. ಒಂದು ದಿನ ಜ್ಞಾನೋದಯವಾಗಿ ಇಂದ್ರಿಯಾಧೀನ ಜೀವನಕ್ಕೂ ದೇವತೆಗಳ ತಪೋಭಂಗ ಪ್ರಯತ್ನಕ್ಕೂ ಧಿಕ್ಕಾರ ಹೇಳಿ ಬ್ರಹ್ಮಪಾರವೆಂಬ ಮಹಾತಪಸ್ಸು ಮಾಡಲು ಪುರುಷೋತ್ತಮಕ್ಷೇತ್ರಕ್ಕೆ ಹೋದ. ಇವರ ಮಗಳಾದ ಮಾರಿಷೆಯನ್ನು ಪ್ರಚೇತಸ್ ಮುನಿ ವರಿಸಿದ. ಪ್ರೇಮಬಂಧ ಎಷ್ಟು ಪ್ರಬಲವಾದುದೆಂಬುದಕ್ಕೆ ಕಂಧವೃತ್ತಾಂತ ಉತ್ತಮ ನಿದರ್ಶನವಾಗಿದೆ.  (ಎನ್.ಎಸ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ